Tuesday, 20 October 2015

ಎಲ್ಲರೂ ಓದಲೇಬೇಕಾದ ಹೃದಯ ಸ್ಪರ್ಶಿ ಕಥೆ


ಗಂಡ ಹೆಂಡತಿ ಎರಡು ಮಕ್ಕಳಿರುವ ಗಲ್ಫ್ ಕುಟುಂಬ...

ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ  ಗಂಟೆಗಟ್ಟಲೆ  ಸುತ್ತಿ ಸಂತೋಷಿಸಿದರು...

ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ...
ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು....

ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು
ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು

ಮಗನು ಸಿಕ್ಕಿದ ಕೂಡಲೇ ಹೆಂಡತಿ  ಮತ್ತು ಮಕ್ಕಳನ್ನು ಪ್ಲಾಟಿಗೆ ಕಳುಹಿಸಿ ಗಂಡ ಟ್ರಾವಲ್ಸಿಗೆ ಹೋಗಿ ನಾಲ್ಕು ಟಿಕೆಟ್ ಬುಕ್ ಮಾಡುತ್ತಾರೆ....

ಟಿಕೆಟ್ ಕೈಯಲ್ಲಿ ಸಿಕ್ಕಿದಾಗ ಹೆಂಡತಿ ಆಶ್ಚರ್ಯದಿಂದ ಕೇಳಿದಳು
ಅಲ್ಲ ಮನುಷ್ಯಾ ನಿಮಗೇನಾಗಿದೆ...?
ಊರಿನಲ್ಲಿ ಯಾರಾದರೂ ಮರಣ ಹೊಂದಿದರಾ......?ಅವಸರದಿಂದ ಮನೆಗೆ ಹೋಗಲಿಕ್ಕೆ"......?
ಕೂಡಲೆ ಗಂಡ ಅಳುತ್ತಾ ಹೇಳಿದರು
"ಸ್ವಂತ ಮಗನನ್ನು  ಎರಡು ಗಂಟೆ ಸಮಯಕ್ಕೆ ಕಾಣಾದಾದಾಗ ನೀನು ತುಂಬಾ ಬೇಜಾರು ಮಾಡಿದೆಯಲ್ಲ....?

"" ಹಾಗಾದರೆ ನಾನು ಕಳೆದ ಹತ್ತು ವರ್ಷದಿಂದ ನಿನ್ನ ಮಾತು ಕೇಳಿ ನಾನು ಊರಿಗೆ ಹೋಗದ ಕಾರಣ  ನನ್ನನ್ನು ಒಂದು ಸಲ ನೋಡದೆ ನನ್ನ ತಾಯಿ ಎಷ್ಟು ಸರ್ತಿ ಬೇಜಾರು ಮಾಡಿರಬಹುದು "....?
ಅದಕ್ಕೆ ಅವಳ ಪ್ರತಿಕ್ರಿಯೆ ಮೌನವಾಗಿತ್ತು......

ತಂದೆ ತಾಯಿಯ ಮನಸ್ಸಿಗೆ ಘಾಸಿ ಉಂಟು ಮಾಡಿ ಯಾರು ಅಧಿಕ ಕಾಲ ಸುಖವಾಗಿ ಜೀವಿಸಿಲ್ಲ.

ನೀವು ತಂದೆ ತಾಯಿಯರನ್ನು ಪ್ರೀತಿಸುವುದಾದರೆ ಬಾಧ್ಯತೆಗಳು ನೆರವೇರಿಸುದಾದರೆ ಅವರು ಜೀವಿಸಿರುವಾಗ ಮಾಡಿರಿ...
ಮರಣ ಹೊಂದಿದರೆ ಶತ್ರು ಕೂಡ ಅಳುತ್ತಾನೆ ಮತ್ತೆ ಮಕ್ಕಳು....
via Whatsapp

Ads-Clik here to earn talktime within minute

1 comment: