Monday, 19 October 2015

ಗುಂಡನ ತಪಸ್ಸು

**** ಹವ್ಯಕ ಮಾಣಿಯ ಪ್ರಾಮಾಣಿಕತೆ ****
ಒಮ್ಮೆ ಹವ್ಯಕ ಮಾಣಿಯೊಬ್ಬ ಘನಘೋರ
ತಪಸ್ಸಿಗೆ ಕುಳಿತ... ತಪ್ಪಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದ
"ನಿನಗೆಂತಹ ವರಬೇಕು ಕೇಳು" ಎಂದ.... ಮಾಣಿಯಿಂದ
ಉತ್ತರ ಬರಲಿಲ್ಲ.. ದೇವರು ಮಾಯವಾದ .....
.
.
ಮತ್ತೆ ಮಾಣಿ ಘನಘೋರ ತಪಸ್ಸು ಮಾಡಲು ಆರಂಭಿಸಿದ..
ತಪಸ್ಸಿಗೆ ಮೆಚ್ಚಿ ದೇವರು ಮತ್ತೆ ಪ್ರತ್ಯಕ್ಷನಾದ.. ಮತ್ತೆ
"ನಿನಗೆಂತಹ ವರಬೇಕು ಕೇಳು" ಎಂದ... ಈ ಬಾರಿಯೂ
ಮಾಣಿಯಿಂದ ಉತ್ತರವಿಲ್ಲ.... ದೇವರು ಮತ್ತೆ ಮಾಯವಾದ....
.
.
ಮತ್ತೆ ಮಾಣಿ ತಪಸ್ಸು ಪ್ರಾರಂಭಿಸಿದ ....
ಇದು ಹೀಗೆಯೇ ನೂರು ಬಾರಿ ನಡೆಯಿತು... ಆದರೂ ಪ್ರತಿಬಾರಿಯೂ
ಮಾಣಿ ಏನನ್ನೂ ಕೇಳುತ್ತಿರಲಿಲ್ಲ...
.
ಈ ಬಾರಿ ದೇವರು ಉಗ್ರ ಕೋಪದಿಂದ ಪ್ರತ್ಯಕ್ಷನಾಗಿ
"ನಿನಗೆಂತಹ ವರ ಬೇಕು.... ಕೇಳು" ಎಂದ ಆಗಲೂ ಮಾಣಿ ಮಾತನಾಡದಿದ್ದಾಗ
ದೇವರು ಕೇಳಿದ "ಹೀಗೇಕೆ ಮಾಡುತ್ತಿರುವೆ.. ನಿನಗೆ ಯಾವುದೇ ವರ ಬೇಡವೇ...???"
ಅದಕ್ಕೆ ಮಾಣಿ ಕೊಟ್ಟ ಉತ್ತರ....
.
.
"ಓ ದೇವರೇ ನೀನು ಪ್ರತಿ ಬಾರಿಯೂ ಬಂದಾಗ 'ನಿನಗೇನು ವರ ಬೇಕು' ಎಂದು ನನ್ನ ಕೇಳುತ್ತಿದ್ದೆ
ಆದರೇ ನಾನು ಇಷ್ಟು ತಪಸ್ಸು ಮಾಡಿದ್ದು ನಿನ್ನಿಂದ ಎಂಥಹ "ವರ" ಬೇಕು ಎಂದು ಕೇಳಿಸಿಕೊಳ್ಳಲು ಅಲ್ಲ ಬದಲಾಗಿ
ಎಂತಹ "ವಧು"ಬೇಕು ಎಂಬುದನ್ನು ಕೇಳಿಸಿಕೊಳ್ಳಲು.... ಹೀಗಿದ್ದರೋ ಒಮ್ಮೆಯೂ ನೀನು ಅದನ್ನು ಕೇಳಲಿಲ್ಲವಲ್ಲ......" ಎಂದ

Via Whatsapp

No comments:

Post a Comment